Friday 27 December 2013

ಹನಿಗವನಗಳು

೧. ಮೋಡದ ಒಳಗೆ ಹುಟ್ಟುವ ಹನಿಯ.. ಧೂಳಲಿ ಸೇರಿ ಮಾಡುವ ದ್ವನಿಯ.. ಕೇಳಬೇಕು ನನ್ನ ನಲ್ಲೆ ನೀ ಮಾಡುವ ಗದ್ದಲವ.. ನನ್ನ ಎದೆಗೊರಗಿ ನಿಂತಾಗ  

೨. ಲಹರಿ ಎನದಾದರೆ, ಸ್ವರ ನೀನು; ಹಾಡು ನಾನಾದರೆ, ಧ್ವನಿ ನೀನು.. ಹಕ್ಕಿ ನಾನಾದರೆ, ರೆಕ್ಕೆ ನೀನು....ಎಲೈ ಆಗಸ ನಾನಾದರೆ ಮೂಡಲ ರವಿ ನೀನು 

 ೩. ಹಾರಿತೆಂದಾಗ ನೆನಪಾಯಿತು, ನನ್ನ ರೆಕ್ಕೆ ಎಲ್ಲಿ ಹೋಯಿತೆಂದು... ಯೋಚನೆ ಮೂಡಿತೊಂದು.. ಹೇಳು ನಾ ಯಾರೆಂದು..ಆಗ ತಿಳಿಯಿತೊಮ್ಮೆ  ನಾ ನಾನಲ್ಲ... ನನ್ನೊಳಗೆ ನೀ .. ನೀನಿದ್ದರೆ ನಾ... ಇಲ್ಲದಿರೆ ಶೂನ್ಯ 

೪. ಸರಿ ತಪ್ಪುಗಳ ನಡುವೆ ಪ್ರಪಂಚ; ಎತ್ತೆಳೆದು ಆಡಿಸಿದೆ ಜೀವನ;
ಸಾಯುವ ಜೀವಕೆ ನೀರುಣಿಸುವುದು ಸರಿ, ಅವ ಕೊಲೆಗಾರನಗಿದ್ದರೆ ತಪ್ಪು...
ಈ ಭ್ರಮೆ ಎನಿತು .. 
ಮಾಯಲೋಕದೋಳ್ ಪಾತ್ರಧಾರಿ ನಾನಾಗಿ; ಎತ್ತಲಿಂದ ಬಂದೆ, ಎಲ್ಲಿಗೆ ಹೊರಟೆ: ಮದುವೆಗೋ ಮಸಣಕೋ ದಾರಿ ನಿರ್ಧರಿಸುವ ಪುರುಷೋತ್ತಮ ನನ್ನೊಳಗಿಹನೋ ಅವಿತು ಕುಳಿತು.. 
ಯಾರಿಗೂ ಹೆದರದಿರು , ಕರ್ಮವ ಮಾಡುತ ನಡಿ ಮುಂದೆ.. ನಿನ್ನೊಳಗೆ ಇಹುದು ವಿಶ್ವ ಶಕ್ತಿ. 

೫. ನಾನೆಂಬ ಭ್ರಮೆ ಯಾರು , ನನ್ನವರ್ಯಾರು .. ಈ ಭವ ಸಾಗರದೋಳ್ ದಾಟಿಸುವ ನಾವಿಗನ್ಯಾರು ? ಮಾಡುವ ಪೂಜೆಯೇನು ದೋಷವೇನು .. ಪಾಪ ಪುನ್ಯಗಳೇನು ... ಪುಣ್ಯ ಅಧಿಕವೆಂದು ಮೋಕ್ಷ ದೊರಕುವುದೇನು ... ಮೊಕ್ಷವೇ ಆಸೆಯೆಂದರೆ ಅಲ್ಲೂ ದುಃಖವಿದಿಯೇನೋ 

೬. ನಿನ್ನ ಕೋಪವೇನ್ ತಾಪವೇನ್ ತಿಳಿಯುವ ನಾ, ನಿನ್ನ ಪ್ರೀತಿಯೇನ್ ಅರಿಯದೆ ಇರುವೆನೆ ಪ್ರಿಯೇ .. ಯೌವ್ವನವೆಂಬ ಮಾಯಾ ಕನ್ನಡಿಯೊಳು ನಿನ್ನ ಬಿಂಬ ಅದೆನಿತು ಶಾಶ್ವತ .. ಯೌವ್ವನವೇ ಶಾಶ್ವತವಲ್ಲದಮೇಲೆ 

೭. ತಾಯಿಯ ಹಾಲಿಗೆ ಚಡಪಡಿಸುವ ಮಗುವಿನ ಅಳಲಿನಂತೆ, ನಿನ್ನ ನೋಡುವ ಹಂಬಲ ಹೆಚ್ಚುತಿರುವಂತಿದೆ ... 
ನೀ ಬಾರದೇ ಹೋದಂತೆ: ಕತ್ತಲು ಕವಿದು ನನ್ನ ಆವರಿಸಿ, ಮನಸಿನ ತಳಮಳ ದಿಘ್ಭ್ರಮೆ ಮೂಡಿಸಿ, ಕಾಯುವ ಹೃದಯದ ಬಡಿಗೆ ನಡಗುವಂತೆ, ಭಾವನೆಯ ಮಹಾಪೂರ ಎದೆಯೆನ್ನಾವರಿಸಿ ನೃತ್ಯ ಮಾಡಿದಂತಿದೆ... 
ನಿನ್ನ ಆ ಧ್ವನಿಯ ಸಪ್ಪಳ ಕೇಳಿದಂತೆ, ನಡುಕ ನಿಂತು, ಮನಸು ಹಗುರಾಗಿ, ರೆಕ್ಕೆ ಬಂದು ಹಾರಿತಾಮನವು 

೮. ಸೂರ್ಯ ಮುಳುಗುತಿರಲು... ನೀ ಬೀರುವ ಆ ತುಂಟ ನೋಟದೊಳು..  ಮುಸಿ ನಗೆಯೊಳು.. ತಿರುಗುವ ಭಾವಾದೊಳು ...  ಕೆಂಪು ತುಟಿಯ ಅಂಚಿನೊಳು .. ಇರುವ ದೂರದೊಳು .. ನಡುವಿನ ಅಂತರದೊಳು .. ಘಾಡ ಕತ್ತಲಿನಲ್ಲಿ ನಿನ್ನ ನೆನಿಪಿನೊಳು : ಕಳೆವ ಕ್ಷಣಗಳು - ರೋಮಾಂಚನ ..ಸಿಂಚನ ..ಕಾಂಚನ !

೯. ಡಾರ್ಲಿಂಗ್ ...ಲವ್ .. ಡಿಯರ್ ಅನ್ನೋ ಸಮಯದೊಳು ... ಹೋಗೆ, ಬಾರೆ, ಲೇ ಅನ್ನೋವಾಗ ಅರಿಯುವ ಸತ್ಯ ; ಮೊದಲ ಮೂರು ಪದಗಳು ಬೇರೆ ಹುಡುಗಿಯರಿಗೆ ಮೀಸಲು ..ಮಿಕ್ಕಿದ್ದೆಲ್ಲ ಹೆಂಡತಿಯೊಬ್ಬಳಿಗೆ 

೧೦. ಆಕಾಶ ನಿನ್ನ ಸೀರೆಯಾದರೆ, ಕಾಮನಬಿಲ್ಲು ನಿನ್ನ ರವಿಕೆಯ ಅಂಚು;
ಮಳೆ ಹನಿ ನಿನ್ನ ಕಂಬನಿಯಾದರೆ, ಮೋಡ ಕವಿದ ಸೂರ್ಯ ನಿನ್ನ ಲಜ್ಜೆಯೇ ?
ಸೂರ್ಯ ನಿನ್ನ ಹಣೆ ಬೊಟ್ಟುಯಾದರೆ, ಮಿಂಚು ನಿನ್ನ ಸೊಂಟದ ಇಣುಕು;
ಶಶಿಯು ನಿನ್ನ ನಗುವಾದರೆ, ನಕ್ಷತ್ರಗಣ ನಿನ್ನ  ಕಣ್ಣಿನ ಮಿಂಚು.... 
... ಆ ಕಣ್ಣ ಮಿಂಚಿನ ಬೆಳಕಲ್ಲಿ ನನ್ನ ಬದುಕಿನ ಅಂಚು, ಓದುತಿರುವೆ ನಾ ಪ್ರೀತಿಯ ಸಂಚು;
ಸಂಚು ಮುಗಿದಂತೆ ಹೊಸ ತಿರುವಿನಂತೆ ಹುಟ್ಟಿತು ಕವಲು ದಾರಿ .. 
ದಾರಿಯ ಒಂದು ಬದಿ ನೀಯಾದರೆ ಇನ್ನೊಂದೆಡೆ ಒಂಟಿತನದ ಗೋಜು .. ಗೋಜೊಲು ದಿಕ್ಕು ತೋಚದೆ ಓಡಿ ಬರಲೇ ನಿನ್ನೆಡೆಗೆ ಎನಿಸಿದಾಗ .. ಹೊರಟಿತು ಚೀರುವ ದನಿಯೊಂದು ...ಏನೆಂದು ಹೊರಳಿ ನೋಡಿದಾಗ ಆಗಿತ್ತು ಅದು ನನ್ನ ಗಡಿಯಾರದ ರಿಂಗಣವೆಂದು 

೧೧. ಕಣ್ಣ ರೆಪ್ಪೆಯಂಚಿನಲಿ ಕಂಡಿದೆ ಭೀತಿಯ ನೋಟವೊಂದು; ನೋಟದ ಅರ್ಥವಿಷ್ಟೇ: ಕಳೆದುಕೊಂಡೆಯಾ ನಿನ್ನ ಆತ್ಮ ವಿಶ್ವಾಸವಿಂದು .. 
ಕಣ್ಣ ರೆಪ್ಪೆ ಮುಚ್ಚಿದೊಡೆ ನೆನೆಸು ನೀ ನಿನ್ನ ಪ್ರೀತಿಯ ದಿನಗಳನ್ನು, ಕ್ಷಣಗಳನ್ನು ... ಆತ್ಮದಲ್ಲಿ ತುಂಬುತಿರು ಪ್ರೀತಿಯಾ, ವಿಶ್ವಾಸ ತನಂತಾನೆ ಪುನಶ್ಚೇತನವಾದಿತು  ಮರುಭೂಮಿಯಲ್ಲಿ ಸಾಯುವ ಜೀವಕೆ ಜಲ ಸಿಕ್ಕಂತೆ 

೧೨. ಮುಂಜಾನೆಯೊಳು, ಅರೆ ನಿದ್ದೆಯೊಳು, ಹಾಸಿಗೆಯಿಂದ ಏಳುವ ಹೋರಾಟದೊಳು,ದೇವರ ಮನೆಯಲಿ ಇಂಪಾದ ಧ್ವನಿ ಬರುತಿರಲು, ಧ್ವನಿಯ ಮೂಲ ಸುಬ್ಬಲಕ್ಷ್ಮಿ ಸ್ವರ ಸುಪ್ರಭಾತವಾಗಿರಲು, ದೇವಲೋಕವೇ ತುಚ್ಚವೆನಿಸುವುದು ಮನುಜ ನೀ ಕಣ್ತೆರೆಯಲು. 

೧೩. ಕರಗಿ ಹೋಯಿತು ಬಣ್ಣ,ಮುದುಡಿ ಹೋಯಿತು ಬಳ್ಳಿ , ಚೂರಾಯಿತು ಹೃದಯ, ಮಂಕಾಯಿತು ಬುದ್ಧಿ; 
ಹಕ್ಕಿಯ ರೆಕ್ಕೆಯು ಮುರಿದು, ಹರಿಣಿಯ ಕಾಲು ನಲುಗಿ, ಬೆಳಕು ಕತ್ತಲೆಗೆ ಹೆದರಿ , ಹೃದಯ ಗಾಜಿನಂತಾಗಿರಲು; ಕಲ್ಲೊಡೆದು ನಗುವ ಜನರಿಹರು .. ಚಿಮ್ಮಿ ಹೊರ ಬರುವುದೇ ಕೊನೆ ಕ್ಷಣದ ಹುಸಿ ನಗುವು ? 

೧೪. ಪೂರ್ಣಿಮೆಯ ಚಂದ್ರ ಮೇಲಿರಲು, ಆಗಸದೊಳು ಚಲಿಸುವ ಮೋಡವಿರಲು, ಮೋಡದ ಜೊತೆ ಚಂದಿರನ ಜಗಳವಿರಲು, ಬಂಡಿಯ ಹಿಂದೆ ಪ್ರೇಯಸಿ ಇರಲು , ಮನೆಗೆ ಹೊರೆಡಲು ಇಚ್ಚಿಸುವವನೇ ಮೂಢ 

೧೫. ಆ ಶಶಿಯು ಇಣುಕಿ ನೋಡುತಿಹನು ಕಿಟಕಿಯಿಂದಾಚೆ, ಹೊರಳಿ ನೋಡಿದರೆ ನಗುತಿಹನು; ಮೋಡದ ಹಿಂದೆ ಮುಂದೆ ಸರಸವಾಡುತ ನಕ್ಷತ್ರಗನಕ್ಕೆ ಹೇಳುತಿಹನು, ನನ್ನ ಎದೆಯ ಅನಿಸಿಕೆ ತಿಳಿಸಿಬಿಡು ಪ್ರಿಯೆಗೆಂದು,
ನಕ್ಷತ್ರಗಳು ಮಿನುಗಿ ನಗುವಿನ ಅಲೆಯ ಮಾಡುತಿಹರು; 
ಇರುಳಿನಲಿ ಸೊಬಗಿದೆ, ಮೋಡದಲಿ ಹನಿಯಿದೆ, ಸಾಗರದ ಅಲೆಯ ಧ್ವನಿಯೊಳು ಇಂಪಿದೆ, ಗೆಜ್ಜೆಯ ಝೆಂಕಾರವಿದೆ, ನಿನ್ನ ಸನಿಹದೊಳು ಜಗವಿದೆ, ನಿನ್ನ ವಿರಹದೊಳು ಸಿಹಿ ನೆನಪಿದೆ

೧೬. ಜೊರ ಬಂದಾಗ ನೆನಪಾಗುವುದೇ ವೈದ್ಯ , ದಾಹ ಬಂದಾಗ ಬೇಕಾಗುವುದೇ ನೀರು, ಶೆಕೆ ಬಂದಾಗ ನೆನಪಾಗುವುದೇ ತಂಗಾಳಿ, ಚಳಿ ಇದ್ದಾಗ ಮಾತ್ರ ಬೇಕಾಗುವುದು ನಿನ್ನ ಬೆಚ್ಚೆನೆಯ ಅಪ್ಪುಗೆ 

೧೭. ಕಣ್ಣಂಚಿನ ಮಿನುಗಿನ ನೋಟವು ಬೆತ್ತಲೆ ಮಾಡತೊಡಗಿತು ನನ್ನ ಮನಸಿನ ಅನಿಸಿಕೆಯ, ನಿನ್ನ ಮುಗುಳುನಗೆಯು ಆಕ್ರಮಿಸಿತು ನನ್ನೆದೆಯ; ಆ ಸಂಪಿಗೆ ಮೂಗಿನ ನಿಶ್ವಾಸ ಉಷ್ವಾಸ ಆವರಿಸಿತು ನನ್ನ ಮೈಯ್ಯ .. ಎಲೈ ಸುಂದರಿಯೇ - ಇನ್ನು ನಿನ್ನ ಸನಿಹವಿದ್ದರೆ, ಕೊಲೆ ಮಾಡಿ ಬಿಡುವೆ ನನ್ನ 

೧೮. ಮನಿಸ್ಸಿನ ಉದ್ವೇಗ ಕ್ಷಣದ ಪಯಣ, ರವಿಯ ಕಿರಣ ಬೀಳಲು ನಿಮಿಷದ ಪಯಣ, ಗಡಿಯಾರದ ಕೂಗು ಘಂಟೆಯ ಪಯಣ, ಬೆಳಕಿನಿಂದ ಕತ್ತಲಿನೊಳು ದಿನದ ಪಯಣ, ಸಂಕ್ರಮಣದೋಳ್ ಭಾಸ್ಕರನು ಸಂಚರಿಸುವ ತಿಂಗಳ ಪಯಣ, ಭೂಮಿಯು ಸೂರ್ಯಮಂಡಲದೋಳ್ ಸುತ್ತಲು ವರ್ಷದ ಪಯಣ, ನಿನ್ನ ನನ್ನ ಪಯಣ.. ನಿರಂತರ, ಅನಂತ ಸಾಗರ 

೧೯. ಮನೆಯಲಿ ರಾತ್ರಿಯಾಗಿರಲು, ಕೋಣೆಯಲಿ ಒಬ್ಬನೇ ಇರಲು, ದೀಪ ಆರಿರಲು, ಮೊಬೈಲ್ ಕೈಯಲ್ಲಿ ಇರಲು, ಮನಸಿಗೆ ಹಾತೊರೆಯುವ ಪ್ರಶ್ನೆ, ನಿನ್ನ ಉತ್ತರ ಯಾವಾಗ ಬರುವುದೆಂದು; 
ಉತ್ತರ ನಿನ್ನಿಂದ ಬಾರದಿರಲು, ಮೊಬೈಲ್ ಗುರ್ರ್ ಎಂದು ಶಬ್ದ ಮಾಡಲು, ನಾ ಎಚ್ಚರಗೊಂಡು ಅತಿಷೆಯದಿಂ ಎತ್ತಿಕೊಳ್ಳಲು, ಬೇರೆ ಗೆಳತಿಯ ಸಂದೇಶವೆಂದು ತಿಳಿಯಲು, ಚಡಪಡಿಸುತ ಕೂತಿರುವೆ ಮತ್ತೊಮೆ ಅವಳ ಆಗಮನಕ್ಕೆ. 

೨೦. ನೆನ್ನೆ ನಾಳೆಗಳ ಒದ್ದಾಟದಲ್ಲಿ, ಬೆಳಿಗ್ಗೆ ಸಂಜೆಯ ಅಂತರದಲ್ಲಿ, ಘಂಟೆ ನಿಮಿಷಗಳ ಘಳಿಗೆಯಲ್ಲಿ; ಈಗನ್ನು ಸವಯುದವ ಮರೆತ ನಾವು, ಅವನಗಿಂತ ಬಲ್ಲ ಸಮರ್ಥರೆಂದು ವಾದ ಪ್ರತಿವಾದ ಮಾಡಿ ಜೀವಿಸುತ್ತೇವೆ.. ಜೀವ ಹೋದ ನಂತರ ಆಕಸ್ಮಿಕಗಳಿಗೆ ಹೋಲಿಸಿ ಮನಃಶಾಂತಿ ಪಡೆಯಲು ಹಂಬಲಿಸುತ್ತೇವೆ .. ಮನುಜನ ಅಹಂಕಾರವೇ ಅವನ ಸರ್ವ ಪತನಕ್ಕೆ ಕಾರಣ ... ಸಕಲ ಗೃಹ ಬಲ ನೀನೇ ಸರಸಿಜಾಕ್ಷ 

೨೧. ಕವಿತೆ ನನ್ನ ಗೆಳತಿ ನಿನಗೆಂದು ಹೇಳುವೆ ಕೇಳು, ಮಳೆಯ ಚಟ-ಪಟ ಹನಿಯ ದನಿಯೊಳು ನಾದವಿದೆ, ಇರುವೆಯ ಸಾಲಿನಲೂ ಒಂದು ಅರ್ಥವಿದೆ, ಮಿಂಚು ಹುಳುವಿನ ತುದಿಯಲು ಬೆಳಕಿದೆ, ನಿನ್ನ ದನಿಯೊಳು ಸುಮಧುರ ಸಂಗೀತವಿದೆ . 

೨೨. ಶಬ್ದ ಕೋಶದ ಪದಗಳು ಖಾಲಿಯಾಗಿವೆ ನಿನ್ನ ನೋಟವ ವರ್ಣಿಸಲು ಹೋಗಿ, ದ್ವಂದ್ವದಲ್ಲಿ ಸಿಕ್ಕಿರುವೆ ಈಗ - ಪದ್ಯವನ್ನು ಮುಂದೆ ಬರೆಯಲೆಂದೊ, ನಿನ್ನ ನೋಡುತ ಜೀವನ ಕಳೆಯಲೆಂದೊ;

೨೩. ಲಕ್ಷ್ಮಿ ಎಂದರೆ ಕೆಲವರಿಗೆ ಕಾಂಚಣ, ಕೆಲವರಿಗೆ ಅನ್ನ, ಹಲವರಿಗೆ ದೇವರ ಮೂರ್ತಿ, ಮತ್ತೋರ್ವರಿಗೆ ಮನೆ,ಮಡದಿ, ಮಕ್ಕಳು ಇತ್ಯಾದಿ... 
ನಿಜವಾದ ಸ್ಥಿರ ಲಕ್ಷ್ಮಿಯ ಬಣ್ಣನೆ ಹೃದಯದ ಅಂತರಾಳದಲ್ಲಿದೆ, ಅವಳ ಸ್ಥಾನ ಅಲ್ಲಿರುವುದು ಪದ್ಮನಾಭಾನೇ ಒಪ್ಪಿ ಯೋಗ ನಿದ್ರೆಗೆ ಜಾರಿರುವ.. ನಿಜವಾದ ಲಕ್ಷ್ಮಿ ಎಂದರೆ ನೆಮ್ಮದಿ .. ಆ ನೆಮ್ಮದಿ ಎಲ್ಲರಿಗು ಸಿಗಲಿ ಎಂದು ಆಶಿಸುವೆ. 

೨೪. ಕತ್ತಲನ್ನು ನೂಕುವ ಬೆಳಕಿನ ವಿಶೇಷವಿದೆ, ಕತ್ತಲಿದ್ದರೆ ಮಾತ್ರ ಇದಕ್ಕೊಂದು ಅರ್ಥ, ಹೋರಾಟದಲ್ಲಿ ಸೋಲು ಗೆಲುವುಗಳ ಬೇಧವಿಲ್ಲ, ಕತ್ತಲಿನಿಂದ ಬೆಳಕಿನೆಡೆಗೆ ಹೋಗುವ ನಾವು ಆಗಾಗ ಕತ್ತಲಿನ ಬಗ್ಗೆಯೂ ಅನುಕಂಪ ತೋರಬೇಕು .. ಏಕೆಂದರೆ ಕತ್ತಲಿನಲ್ಲೇ ಬೆಳಕಿನ ಉದಯ ಕಾಣಲು ಸಾಧ್ಯ. 

೨೫. ನಿನ್ನ ಚಂದಿರನಿಗೆ ಹೋಲಿಸಲಾರೆ, ಅವನಲ್ಲೂ ಕಪ್ಪು ಚುಕ್ಕಿಯಿದೆ.... ಹಾಲಿಗೂ ಹೋಲಿಸಲಾರೆ, ಹುಳಿ ಹಿಂಡಿದರೆ ಹೆಪ್ಪಾಗುವುದು ... 
ನಿಂತ ನೀರಿಗೆ ಹೋಲಿಸಲಾರೆ, ಕಲ್ಲೆಸೆದರೆ ಪ್ರತಿಬಿಂಬ ಡೊಂಕಾಗುವುದು ... 
ನೀನು ಹರಿಯುವ ಝಾರಿಯಂತೆ, ನಿರಂತರ, ನಿರುಪಮ, ನಿತ್ಯ ಸತ್ಯ. 

೨೬. ಭಾವನೆ ಶೃಷ್ಟಿಸಿ ಆಡಿಸಿ ಮಾಯೆಯೊಳು ಬಂಧಿಸಿ ಹೋರಾಟವ ನೋಡಿ ಪರೀಕ್ಷಿಸಿ ಅಪರಂಜಿಯ ಹೊರಗೆ ತೆಗೆಯುವ;
ಅಪರಂಜಿಗಳು ಹಲವಾರು, ಕಲ್ಲಿದಲ್ಲು ಸಹಸ್ರಾರು, ಅಂತ್ಯದಲ್ಲಿ ಕಲ್ಲಿದಲ್ಲು ಸುಟ್ಟು ಭೂದಿಯಾದೀತು, ಅಪರಂಜಿ ಹೊಳೆದೀತು ... ಅವನ ಲೆಕ್ಕಕ್ಕೆ ಅವೆಲ್ಲ ಒಂದೇ .. ನಿತ್ಯ ಕರ್ಮವೆ ಜಗದ ಸತ್ಯ. 

೨೭. ಅಧರದ ಮಧುರ ಸವಿಯಲ್ಲಿ, ನಿನ್ನ ನೋಡುವ ಹಂಬಲದಲ್ಲಿ, ಗೀಚಿದೆ ಮನಕ್ಕೆ ತೋಚಿದ ನಾಲ್ಕು ಸಾಲುಗಳ... ಬಂದುಬಿಡು ಬೇಗನೆ ನಮ್ಮೂರ ಕಡೆಗೆ ಕಣ್ಮುಚ್ಚಿ ತೆಗೆಯುವ ಕ್ಷಣದಲ್ಲಿ.. ಮಿಡಿಯುತಿದೆ ಹೃದಯ ನಿನಗಾಗಿ 

೨೮. ಮಾತಾಡು ನೀ ಇಲ್ಲ ಮುತ್ತೊಂದು ಕೊಡು, ಮಾತಿನಲ್ಲಿ ತುಟಿಗೆ ತುಟಿ ತಾಕುವುದು ನಿನ್ನಲ್ಲಿ ಮಾತ್ರ, ಮುತ್ತಲ್ಲಿ ನನಗು ನಿನಗೂ ... ಅಪ್ಪಿಕೋ ಬಾ ನನ್ನನು ನೀ.. ಈ ಚಳಿಯ ಕಂಪನ ನಿಲ್ಲುವಂತೆ .. ಅಪ್ಪುಗೆಯ ಶಾಖದ ನೆನಪು ಸಾಕು ಚಳಿಯ ಬಡಿದಟ್ಟಲು. 

೨೯. ಮನದ ಮುಗುಳುನಗೆ ಆ ಹಳೆ ನೆನಪುಗಳ ಮೆಲಕು ಹಾಕುವುದರಲ್ಲಿ; 

ಮೊದಲ ಮಳೆ ಬಂದಾಗ ಮಣ್ಣಿನ ವಾಸನೆಯಲ್ಲಿ, ಪ್ರೇಯಸಿಯೊಡನೆ ಬೈ-೨ ಕಾಫಿ 
ಯಲ್ಲಿ, ಗೆಳೆಯರೊಡನೆ ಆ ಪೋಲಿ ಮಾತುಗಳಲ್ಲಿ, ಬಾಳಿನ ಸಂಗಾತಿಯೊಡನೆ ಆ ಸುಂದರ ಪಯಣಗಳಲ್ಲಿ... 

ಸಂಜೆಯ ಸೂರ್ಯ ಸಮುದ್ರಕ್ಕೆ ಮುಳುಗುವುದರಲ್ಲಿ, ಬೆಳಗ್ಗಿನ ಮೊಗ್ಗು ಅರಳುವುದರಲ್ಲಿ, ರಾತ್ರಿಯ ಚಂದಿರ ಬೆಳಗುವುದರಲ್ಲಿ, ಮಧ್ಯಾನದ ಶಾಲೆಯ ಘಂಟೆ ಬಾರಿಸವುದರಲ್ಲಿ 

ಆ ಸಣ್ಣ ಮಗುವಿನ ಕೆನ್ನೆ ಕೆಂಪಾಗುವುದರಲ್ಲಿ, ಪಕ್ಕದ ಮನೆ ಹುಡುಗಿ ನೋಡಿ ಓಡಿ ಹೋಗುವುದರಲ್ಲಿ, ಮೊದಲನೆಯ ಮುತ್ತಿನಲ್ಲಿ, ಮೊದಲನೆಯ ಸ್ಪರ್ಶದಲ್ಲಿ... ಮುಂದೆನಿತು ಹೇಳುವುದು, ನೆನಪಸಿ ನಕ್ಕುಬಿಡಿ :)

೩೦. ನಮ್ಮ ಯಾಣ ಹೊರಟ್ಟಿತ್ತು ಬೆಟ್ಟದ ಕಡೆಗೆ, ಬೆಳಿಗ್ಗೆ ಆಯಿತು ಇಡ್ಲಿ ವಡೆಯ ಸೇವೆ; ಕಣ್ಣಲ್ಲಿ ಕಣ್ಣಿಟ್ಟು ನೋಡುತ ಕುಳಿತೆವು ಬೆಟ್ಟದಂಚಿನಲಿ, ಕಾಲ ಉರುಳಿತು, ಸಂಜೆಯಾಯಿತು, ಮರಳಿ ನಡೆದೆವು ಮನೆಯ ಕಡೆಗೆ; 
ರಾಮ ಹರಸಲಿ ನಮ್ಮಿಬ್ಬರ ಜೋಡಿಯ, ಚಿರಕಾಲ ಉಳಿಯಲಿ ಸ್ನೇಹ ಸಂಬಂಧ ಎದೆಯ ಗೂಡಿನಲ್ಲಿ..
ಮರಳಿ ಬರಲಿ ಇಂತಹ ಪಯಣಗಳು, ಬೆಟ್ಟದ ತುದಿಗಳು, ಸುಂದರ ಕಣ್ಣುಗಳು, ರಸವತ್ತಾದ ತುಟಿಗಳು,ಲಜ್ಜೆಯ ಸನ್ಹೆಗಳು, ಪ್ರೇಯಸಿಯ ಅಪ್ಪುಗೆಯು, ಕೂಸುಮರಿಯ ನೆನಪುಗಳು, ಎಲ್ಲದಕ್ಕೂ ಮಿಗಿಲಾಗಿ ಜೊತೆಯಿರುವ ಅನುಭವಗಳು. 

೩೧. ಅಕ್ಷರದ ಜೋಡಣೆ ಪದವು, ಪದಗಳ ಜೋಡಣೆಗೆ ವಾಕ್ಯವು, ವಾಕ್ಯಗಳ ಗುಂಪು ಗದ್ಯವು, ನಿನ್ನ ನೋಡಿದ ಮೇಲೆ ತಲೆಯೊಳಗೆ ಮಿಂಚಿತು ... ಪದ್ಯದ ಮೇಲೆ ಪದ್ಯವು. 

೩೨. ಸೊಂಪು ಸೂಸುವ ನಿನ್ನ ನಗೆ, ಕೆಂಪು ತಾವರೆಯ ನಿನ್ನ ತುಟಿ,ಮೀನಿನ ಹೆಜ್ಜೆ, ನಿನ್ನ ಕಣ್ಣೋಟ, ಬಿಂಕ ಬಿಗುಮಾನ.. ಯಾರ ಕೊಲೆ ಮಾಡಲು ಹೊರಟಿರುವೆ ಗೆಳತಿಯೇ.. ನಿನ್ನ ಅಂದ ಚೆಂದ ವಯಾರಕ್ಕೆ ಬಿದ್ದು ಹೋಗಿ, ಈಜಲು ಮರೆತು, ಮುಳುಗಿ ಹೋಗುವವರ ಕಡೆಗೆಲ್ಲ ನಿನ್ನ ಕೈಯ ಉಗುರಿನಂಚನು ತಾಕಿಸು... ನೀರು ಬತ್ತಿಹೋಗಬಹುದು ಆ ನಿನ್ನ ಸ್ಪರ್ಶದ ಶಾಖಕ್ಕೆ. 

೩೩. ಮುಂಜಾನೆ ಮಂಜಿನ ಹನಿಗಳು ಮೈಯ ಮೇಲೆ ಬೀಳುತಿರಲು, ಎದಿರು ರಸ್ತೆ ಕಾಣದಿರಲು, ಚಳಿಯು ನನ್ನ ನಡುಗುಸಿತರಲು .. ನಲ್ಲೆ ನಿನ್ನ ಒಂದು ನೆನಪು ಎದೆಯನು ಬೆಚ್ಚಗೆ ಇಟ್ಟಿದೆ .. ಬಡಿಯುತಿದೆ.. ರಕ್ತವು ಹರಿಯುತಿದೆ ಮೈಯ ಕಣ ಕಣದೊಳು. 

೩೪. ಪೂಜೆಗೆಂದು ಹೋದಳು ನನ್ನವಳು, ಅವ ಆಶೀರ್ವದಿಸಿದ ಮಳೆಗರೆದು, 
ಹಾಯಾಗಿ ಮಲಗಿರಬೇಕು ಇವಳು, ಆಕಳಿಸುತಾ ಎದ್ದು ನಾ ಕೂತಿರಲು.. ನಾಳೆ ಮುಂಜಾನೆಯ ಹೊಸ ಆಸೆಯಲ್ಲಿ ಮಲಗುತೀನಿ ನಾನೀಗ ... ಒಲವೇ .. ನೀ ಬಂದು ಬಿಡು ಬೇಗ.

೩೫. ಜೇನಿಗೆ ಹೂವ, ಅಡುಗೆಗೆ ಉಪ್ಪು,ಮೂಗಿಗೆ ಕಾಫಿಯ ಪರಿಮಳ, ಪ್ರೇಮಿಗೆ ಮುತ್ತು, ಭಿಕ್ಷುಕನಿಗೆ ಕವಳ; ನಿನ್ನ ಉತ್ತರ .... ಇದೆಲ್ಲವು ಹೃದಯ ಸನಿಹ. 

೩೬. ಮುಂಜಾನೆ ಸೂರ್ಯಕಾಂತಿಯು ಅರಳಿರುವ ಸೊಬಗು, ಹಸಿ ಮಣ್ಣಿನ ಮೆರಗು; ಆ ಬೆಟ್ಟದ ಶ್ರೇಣಿಯ ಮಧ್ಯೆ ತಲೆಯ ಕಿರೀಟದಂತೆ ಕಂಗಳಿಸುತ್ತಿದೆ  ಬಾದಾಮಿ ಇಂದು. 

೩೭. ಮಲಗುವ ಮುನ್ನ ಹೇಳುವೆ ಚಿನ್ನ, ದಿನದ ಕೊನೆಯ ಕವಿತೆ, ನೀ ಅಲ್ಲಿರಲು- ನಾ ಇಲ್ಲಿರಲು ಬಂತೇನು ಸುಖ, ಅಕ್ಕ ಪಕ್ಕದಲ್ಲಿ ಬಿದ್ದು ಹೊರಳಾಡುವ ಬಾ : ಜಗವೇ ಶೂನ್ಯ ನಿನ್ನ ಸೊಂಟದ ಅಂಚು ಹಿಡಿದಿರಲು .. ನಿನ್ನ ಎದೆಯ ಭಾರ ನನ್ನ ಮೇಲಿರಲು.   

೩೮. ಬಿಸಿಲು ಧೂಳಿನ ಮಧ್ಯದ್ದಲ್ಲಿ ಇವಳು ಸಿಕ್ಕಳು ಹೊಟ್ಟೆ ಹಸಿದ ಸಮಯದೊಳು, ಬುರ್ಕಾ ಹಾಕಿದಂತೆ ಬಂದಳು ಓಡೋಡಿಕೊಂಡು; 

ಆ ತಂಪು ಏ/ಸಿ ಹೋಟೆಲ್ ಮೆತ್ತೆನೆಯ ಸೋಫಾ ಮೇಲೆ ಕುಳಿತು ಏನು ತಿಂದೆನೋ ನಾ ತಿಳಿಯೆ, ಸ್ವರ್ಗ ಲೋಕೊದೋಳ್ ತಟ್ಟಿ ಕರೆದಂತಾಯಿತು, ಅವಳ ಕಾಲ್ಗೆಜ್ಜೆ ನನ್ನ ಪಾದಕ್ಕೆ ತಾಕಿದೊಡನೆ; 

ಮನೆಗೆ ಬಂದಳು ನನ್ನೊಡನೆ, ಇಟ್ಟಳು ಒಲೆಯ ಮೇಲೆ ನೀರಿನ ಪಾತ್ರೆಯ... ಆತಂಕ ಮೂಡಿತು ಆ ಚೆಂದದ ಮುಖದೊಳು, ಅರಿಯಲು ಕಷ್ಟವಿಲ್ಲ ಇವಳು ಏನೂ ಅರಿಯಳೆಂದು.... ಸಾವಿರ ದೇವರ ನಾಮ - ಬರೀ ಒಂದು ಟೀ ಸರಿ ಬರಲಿ ಎಂದು. 

೩೯. ಹೋಗುತ ಒಂದು ಸಂದೇಶ ಕೇಳಿ ಹೋಗು ನನ್ನೊಲವೇ , ದೂರದ ಬೆಟ್ಟದಲ್ಲಿರೋ ನವಿಲೇ ... ಗುಬ್ಬಿಗಳು ಕೂಗಡುಟಿವೆ ಅಕ್ಕ ಪಕ್ಕದೊಳು, ಮನದಲಿ ಮಾತ್ರ ನಿನ್ನ ನಾಟ್ಯ ನಿಂತುಬಿಟ್ಟಿದೆ ಕಣ್ಣಿಗೆ ಕಟ್ಟಿದ ಪೊರೆಯಂತೆ; 
ನಾಳೆಯ ಹೊಸ್ತಿಲೊಳು ನಿಂತಿರುವ ಜಗದಲಿ, ನಿನ್ನ ನಗೆಯ ಇರುವು ಮರೆಸುಬಿಟ್ಟಿದೆ ಇಂದು ನಾಳೆಗಳನ್ನು... 
ಈ ಸಿಹಿ ಕನಸುಗಳಲ್ಲಿ ತೇಲಾಡುತಿರುವ ನಮಗೆ, ಬಡಿದೆಬ್ಬಿಸುವವರೆ - ಬೆಳ್ಳಿಗೆ ಹಾಲು, ಪೇಪರ್ ಅನ್ನೋ ಹುಲು ಮಾನವರು.

೪೦. ಏಳು ತಿಂಗಳಾಯಿತು ನಿನ್ನ ವರಿಸುವೆನೆಂದು ಹೇಳಿ, ಏಳು ಸಮುದ್ರದ ದೂರವಿರುವೆಂದು ಭಾಸವಾಗಿದೆ ಈ ಘಳಿಗೆಯಲಿ.....

ಏಳೇಳು ಜನ್ಮಗಳು ಜೊತೆಗಿರುವೆ ಎಂದು ಹೇಳಲು ಉಳಿದಿದೆ ಕೇವಲ ಒಂದು ತಿಂಗಳು, ಸಪ್ತರ್ಷಿಗಳು ಸಾಕ್ಷಿ ಆಗುವರು ನನ್ನ ನಿನ್ನ ಹರಸಲು...

ಏಳು ಹೆಜ್ಜೆ ನೀ ಇಡಲು ಕಾಲುಂಗುರುವ ನಾ ತೊಡಿಸುವೆ, ಹೆಜ್ಜೆಯ ಗುರುತು ನೆಲದ ಮೇಲೆ, ನಿನ್ನ ಭಾವಚಿತ್ರ ಎದೆಯ ಮೇಲೆ, ಎಲ್ಲವು ಸುಂದರ ಸ್ವಪ್ನದಂತೆ ಅನಿಸುತಿದೆ ಇಂದು...

ಸೂರ್ಯನ ಕಿರಣ ನೆಲಕ್ಕೆ ತಾಗಲು ಏಳು ನಿಮಿಷ - ನಿನ್ನ ನೋಟಕ್ಕೆ ಬಲಿಯಾಗಲು ಏಳು ಘಳಿಗೆಯೂ ಬೇಡ ಅನಿಸಿದೆ ....

ಏಳು ಸ್ವರಗಳು ಸೇರಿತು ಶ್ರುತಿಯಾಗಲು, ಏಳು ಎದೆ ಬಡಿತ ಸಾಕಾಯಿತು ನಿನ್ನ ಅರಿಯಲು ....

ಉತ್ಸಾಹದಲ್ಲಿ ಬರೆದೆ ಇಷ್ಟು ಸಾಲುಗಳ, ನೋಡಿದರೆ ಅರಿತೆ ಇದು ಆರನೆಯ ಸಾಲೆಂದು, ಮನಸಲ್ಲಿ ಉಳಿದಿದ್ದು ಗೀಚಿದರೆ ತ್ರಿಪದಿಯ ಬದಲು ಆಗುವುದು "ಸಪ್ತ" ಪದಿಯೆಂದು...

ನನ್ನ ತಾಯಿ, ಹುಟ್ಟು, ಬಾಲ್ಯ, ಓದು, ಆಟ, ಗೆಳೆಯರಾದ ಮೇಲೆ ನನ್ನ ಜೀವನದ ಏಳನೆಯ ಪರ್ವ ನೀನು, ಏಳು ಬೆಟ್ಟದ ಅಧಿಪತಿ ಗೋವಿಂದನಾಣೆಗು ಇದು ಸುಂದರ, ಮಧುರ ಪರ್ವ.

೪೧. ಹಸಿರು ಹೊಸತಲ್ಲ ಕಾಡಿಗೆ, ಉರಿ ಹೊಸತಲ್ಲ ದೀಪಕೆ, ಗಿಣ್ಣು ಹೊಸತಲ್ಲ ಆಕಳಿಗೆ, ನನಗೆ ಹೊಸತಲ್ಲ ಇವಳ ಹೃದಯದ ಬಡಿಗೆ. 

೪೨. ತುಂಬಾ ಘಾಡ ನಿದ್ರೆಗೆ ಜಾರಿರುವಳು, ಸ್ವಪ್ನದ ಅಮಲಿನಲಿ ಇರುವಳು, ಮೀನ ಕಣ್ಣು ಇವಳು; ಅತ್ತರೆ ಕಂಬನಿ ಕಾಣದು, ಆನಂದಭಾಷ್ಪವಾದರೆ ನಗೆಯೂ ಕಾಣದು..

೪೩. ಕಡಲ ತೀರದಲಿ, ಸಂಜೆ ಮುಸುಕಿನಲಿ, ಹಾಡುವ ಗುಂಗಿನಲಿ - ಕೈ ಬೀಸಿ ಕರೆಯಿತು ಸುಂದರ ಸ್ವಪ್ನವೊಂದು, 
ಈಜೋ ಹುಮ್ಮಸಿನಲ್ಲಿ, ನೀರಲಿ ಮುಳುಗೋ ಭಯದಲಿ, ಮತ್ಸ್ಯ ಸೊಬಗನು ಆನಂದಿಸುವ ಆ ರಸ ಘಳಿಗೆಯೂ - ಸ್ವಪ್ನವೇ ...

ಮರದ ಕುರ್ಚಿಯಲಿ, ಇವಳ ಜೊತೆಯಲಿ, ಕಣ್ಣ ನೋಟದಲಿ ಇಹವ ಮರೆವ ನೆನಪು ..ಸ್ವಪ್ನ ! 
ಈ ಎಲ್ಲ ಸ್ವಪ್ನದ ಸರಮಾಲೆ .... ಅತಿ ಮಧುರ :) 
ಸ್ವಪ್ನದ ಹೆಸರೇ ಅಂಡಮಾನ್ ದ್ವೀಪ

೪೪. ನೀರಿನ ಹನಿ ತಾಕಿತು ನನ್ನ ... ಮನವು ಹಂಬಲಿಸಿತು ನಿನ್ನ .. ಈ ವಸಂತದ ಮೊದಲ ಮಳೆಯಲ್ಲಿ ಬಾ ಮಿಂದು ನೆನೆಯೋಣ ಇಬ್ಬರು .. ಪ್ರೇಮದ ಬಿಸಿಯಿಳಿಯುವ ತನಕ

೪೫. ಹಿಮ ಪವ೯ತದ ತುದಿಯಲಿ ಆರಂಭಗೊಂಡ ಇಣುಕು, ವಷ೯ ಋತುವಿನ ಸನಿಹದಲಿ ಆರಂಭಗೊಂಡ ನೋಟ, ದೀಪಾವಳಿಯ ಮುನ್ನ ಭುಗಿಲೆದ್ದ ಆಸೆ.. 

ತನ್ನ ಪಯಣ ಕೊನೆಗೊಳುತ್ತಿದೆ ನಾಳೆಯ ಮದುವೆಯ ಬಂಧನದೊಳು.. 
ನಿರಂತರ ಹರಿಯಲಿ ನಿಮಿಬ್ಬರ ನಡುವೆ ಪ್ರೇಮ ಧಾರೆ, ನಂದನಲ್ಲಿ ಅಚ೯ನನ ಅಪ೯ಣೆಯೊಂದಿಗೆ ... ದುಂಬಿಯಲ್ಲಿರುವ ಭ್ರಮರದಂತೆ


೪೬. ನೈಜ ಪ್ರೀತಿ ಎಂಬುದು ಇರುವುದು ರವಿ ಧರಣಿಯ ನಡುವೆ ...ಮಿಲನ ಅಸಾಧ್ಯವಾದರೂ ಇಬ್ಬರೂ ನೋಡುತಿಹರು ಪ್ರತಿ ದಿನ, ಸಂಧಿಸುವರು ಸಂಧ್ಯಾ ಕಾಲದಲ್ಲಿ ಕಡಲ ಸಾಕ್ಷಿಯಲ್ಲಿ; ಇಬ್ಬರಲ್ಲೂ ಯಾರು ಮೇಲಿಲ್ಲ ಕೀಳಲ್ಲ..ನಾಳೆಯ ದಿನದ ಆಶೆಯೇ ಅವರ ಶಕ್ತಿ.

೪೭. ಮಳೆಯ ಹನಿ ಈಗ ಕಂಬನಿ .. ಮಿಂಚು ಗುಡುಗು - ಮನಸಿನ ಭಾವ; ಹೃದಯದ ಆತ೯ನಾದ.. ಮೋಡದ ಜೊತೆ ಗೋಳನು ತೋಡುತ ಕುಳಿತೆ.. ಮಳೆಯ ಸೊಬಗು, ಬೆರಗು ಇನಿಯೆ ಇದ್ದರೆ ಮಾತ್ರ... ಘಳಿಗೆಯೊಳಗೆ ಮುಗಿಯಲಿ ಮಾಸವಿದು

೪೮. ಅವಳು ನಸುನಕ್ಕಳು ನನ್ನ ನೋಡಿ, ಆ ನಗುವ ನೋಡಿ ಆಯಿತು ನನಗೆ ಮೋಡಿ; ಮತ್ತೆ ನಗಸಲು ಹೋಗಿ ಆದೆವು ಜೋಡಿ; ನೀವು ಈ ಕವನ ನೋಡಿ ಹಲ್ಲು ಬಿಡಬೇಡಿ.   

೪೯. ಸುಂದರ ಮೊಗದ ಚಂದಿರ, ಮಂದಾರ ಸೂಸುವ ಇಂದಿರಾ, ಕೆಂದುಟಿಯ ಕೊಡು ಎನಗೆ , ಸವೆಯುವೆ ಬೆಳದಿಂಗಳಿರುವ ತನಕ. 

೫೦. ನೀ ನಡೆವೆ ಕಲ್ಲು ಮುಳ್ಳಿನ ಜಗದೊಳು, ನೀ ಇರುವೆ  ಬಂಧನಗಳ ಮುಷ್ಟಿಯೊಳು, ನಿನಗಿಲ್ಲ ಅರ್ಧಘಳಿಗೆಯು ನಿಟ್ಟುಸಿರೊಳು.. 

ಛಲದಿಂ ಸಾಧಿಸು ಆ ದೂರದ ಗುರಿಯ, ಗುರಿಯ ಲಕ್ಷ್ಯವಿರಲಿ ಪಾರ್ಥನು ಭೇಧಿಸಿದ ಮತ್ಸ್ಯಯಂತ್ರದಂತೆ

೫೧. ನೀ ಪಡೆದ ಜನ್ಮ, ನೀ ಕುಡಿದ ಅಮೃತ, ನೀ ನುಡಿದ ಮಾತು, ನೀ ನಡೆದ ದಾರಿ, ನೀ ಕಲೆತ ಪಾಠ, ನಿನ್ನ ಸುತ್ತಿರುವ ಬಂಧು ಬಳಗ.. ಸಾಲದು ನಿನ್ನ ನೀ ಅರಿಯಲು .... 

ಇರಲಿ ಚಿತ್ತಸ್ತೈರ್ಯ ನಿನ್ನ ಮೇಲೆ ನೀ ಮೆಟ್ಟಿ ನಿಲಲ್ಲು, ವಿಶ್ವನಾಥನ ಆಣತಿಯನು ನಡೆಸಲು

೫೨. ಅರ್ಧ ಜೀವನ ಕಳೆಯಿತು ನನ್ನ ನಾ ಅರಿಯಲು, ಇನ್ನರ್ಧ ಕಳೆವುದು ನಾ ಎನ್ನ ಮಾಡುವೆನೆಂದು - ಇದರ ಮಧ್ಯಂತರದಲ್ಲಿ ಇರುವುದು ನೂರಾರು ಸ್ವಪ್ನಗಳು, ಭಗ್ನ ಆಸೆಗಳು, ಕಂಡ ಹರುಷಗಳು, ನಿಟ್ಟುಸಿರಿಟ್ಟ ಕ್ಷಣಗಳು. 

೬೦. ಉತ್ತರವೆಂದಳು ಅವಳು, ದಕ್ಷಿಣವೆಂದನು  ನಾ, 
ಪ್ರೀತಿ ಎಂದಳು ಅವಳು, ಅರಿಯೆನೆಂದೇ ನಾ, 
ಮೋಡವ ಅರಸುವಳು ಅವಳು, ಬಿಸಿಲ ಝಳವ ನಾ, 
ಪ್ರಕೃತಿಯು ಅವಳು, ಶಿವನಾದೆನೇ ನಾ 

೬೧. ನುಣುಪಾದ ಕೈಯನು ಒರಗಿಸಿಹಳು ಗಲ್ಲದ ಮೇಲೆ, 
ಕಿವಿಗೆ ಅಲಂಕಾರವ ಮಾಡುತಿಹಳು ಎಂಟು ಕವಚಿವಿರುವ ಮುತ್ತುಗಳಿಂದ, 
ನಗೆಯ ಬೀರುತ ಆಗಿಹಳು ದೇವಿಯ ಮೂರ್ತಿಯಂತೆ । 

೨. ಕಣ್ಣುಗಳ ಹೊಳಪಿನಡುವೆ, ನಾಸಿಕದ ಚೂಪದ ತುದಿಯ ಕಚ್ಚಿ, 
ಅಧರಕೆ ಚುಂಬನವ ಕೊಟ್ಟಿಬಿಡುವ ಹೆಬ್ಬಯಕೆ ತರುತಿಹುದು ನಿನ್ನ ಭಾವಚಿತ್ರವ ನೋಡಿ, 
ಜೋಡಿಸಿಬಿಡು ಒಂದರ ಪಕ್ಕಕ್ಕೆ ಮತ್ತೊಂದ ಚುಂಬನದ ಹಾರವ ।।


೩. ಕೋಣೆಯ ಬಾಗಿಲು ಮುಚ್ಚಿ ಕರೆದೆ ಇವಳ...
ನಲ್ಲೆ, ಕೋಪ ಮಾಡಿಕೊಳ್ಳದಿದ್ದರೆ ಒಂದು ಮಾತು ಎಂದೆ,
ಹೂಂ ಎಂದಳು ಏದುಸಿರಲಿ ..
ನನ್ನ ಚಿನ್ನದುಂಗುರ ಕಾಣುತ್ತಿಲ್ಲ ನೀ ನೋಡಿದೆಯಾ ಎಂದೆ..
ಒಂದೇ ಕ್ಷಣಕ್ಕೆ ಹಾರಿತು ತಾಳ್ಮೆ, ಶುರುವಾಯಿತು ಬೈಗಳ ಸುರಿಮಳೆ,  ಮದುವೆಯ ಮೊದಲ ಕಾಲುಂಗುರ ತೊಡಿಸುವ ಸಂಕಟದಿಂದ ಈಗಿನ ಉಂಗುರದ ಕಳುವಿನವರೆಗೆ...
ಕದನ ಕಲ್ಲಾಪದ ನಡುವೆ ಪಕ್ಕದ ಕೋಣೆಯಲ್ಲಿದ್ದ ನಾದಿನಿ ಬಂದಳು ಕದನ ವಿರಾಮವಾಗಿ ..
ಭಾವ, ನಿಮ್ಮ ಉಂಗುರ ಸ್ನಾನದ ಕೋಣೆಯಲ್ಲಿ ಬಿಟ್ಟಿದಿರಿ, ಇಗೊಳ್ಳಿ ಎಂದಳು ನಸುನಗುತ್ತಾ ...
ಎಷ್ಟಾದರೂ ನಾದಿನಿ ಎಂದರೆ ಅರ್ಧ (ಬೈಗುಳ ರಹಿತ) ಹೆಂಡತಿಯಲ್ಲವೇ !!
ನಲ್ಲೆ, ಕೋಪ ಮಾಡಿಕೊಳ್ಳದಿದ್ದರೆ ಒಂದು ಮಾತು ಎಂದೆ,
ಹೂಂ ಎಂದಳು ಏದುಸಿರಲಿ ..
ನನ್ನ ಚಿನ್ನದುಂಗುರ ಕಾಣುತ್ತಿಲ್ಲ ನೀ ನೋಡಿದೆಯಾ ಎಂದೆ..
ಒಂದೇ ಕ್ಷಣಕ್ಕೆ ಹಾರಿತು ತಾಳ್ಮೆ, ಶುರುವಾಯಿತು ಬೈಗಳ ಸುರಿಮಳೆ,  ಮದುವೆಯ ಮೊದಲ ಕಾಲುಂಗುರ ತೊಡಿಸುವ ಸಂಕಟದಿಂದ ಈಗಿನ ಉಂಗುರದ ಕಳುವಿನವರೆಗೆ...
ಕದನ ಕಲ್ಲಾಪದ ನಡುವೆ ಪಕ್ಕದ ಕೋಣೆಯಲ್ಲಿದ್ದ ನಾದಿನಿ ಬಂದಳು ಕದನ ವಿರಾಮವಾಗಿ ..
ಭಾವ, ನಿಮ್ಮ ಉಂಗುರ ಸ್ನಾನದ ಕೋಣೆಯಲ್ಲಿ ಬಿಟ್ಟಿದಿರಿ, ಇಗೊಳ್ಳಿ ಎಂದಳು ನಸುನಗುತ್ತಾ ...
ಎಷ್ಟಾದರೂ ನಾದಿನಿ ಎಂದರೆ ಅರ್ಧ (ಬೈಗುಳ ರಹಿತ) ಹೆಂಡತಿಯಲ್ಲವೇ !!


೬೪. ಕೆಫೆಯಲ್ಲಿ ಕೂತಿಹಳು ಕಾಫಿಗಾಗಿ ಕಾಯುತಾ, 
ಕ್ಯಾಮೆರಾ ಕಣ್ಣಿಗೆ ಚೆಲ್ಲಿಹಳ್ಳು ಮಂದಹಾಸವ ಬೀರುತ, 
ಹಾರುತ ಕುಳಿತಿಹುದು ಮನವು ಆ ಕೇಶರಾಶಿಯತ್ತ, 
ಓಹ್ ಬಾಲೆ, ನೀ ಇಂದು ಒಂದದ್ಭುತ ಅದ್ಭುತ ಅದ್ಭುತ




Thursday 20 May 2010

ELMAH - Error Logging Plugin for your .Net Apps

Error Logging Modules and Handlers (ELMAH)

ELMAH (Error Logging Modules and Handlers) is an application-wide error logging facility that is completely pluggable. It can be dynamically added to a running ASP.NET web application, or even all ASP.NET web applications on a machine, without any need for re-compilation or re-deployment. ELMAH supports ASP.NET 1.x, ASP.NET 2.0 and ASP.NET 3.5 applications and ships with a variety of log source providers like XML or database.

Few of its features are –
• Logging of nearly all un-handled exceptions.
• A web page to remotely view the entire list of recoded exceptions and
then view the full details of any one logged exception.
• In many cases, you can review the original yellow screen of death
that ASP.NET generated for a given exception, even with customErrors
mode turned off.
• An e-mail notification of each error at the time it occurs and an
RSS feed of the last 15 errors from the log.
• Log errors to several back-end storages like Microsoft SQL Server,
Oracle (OracleErrorLog), XML files, etc.
• Filter unwanted exceptions, programmatically and via configuration.
• Use MsAjaxDeltaErrorLogModule to log errors during partial updates
enabled by Update Panel in Microsoft ASP.NET AJAX.

Usage -
ELMAH can be used in all APS.Net web applications which run on .Net framework 1.x, 2.0 and 3.5.

Source
Open-source/Developed/Customized

Advantage
1. Helps in debugging/resolving production deployed application issues
well within support SLA time frame.
2. Ability to view detailed application exceptions remotely, thus reduces
our turnaround time in responding to customer queries.
3. Its free, open-source and highly customizable.
4. Easy to implement in existing projects.
5. Instant notification to support and maintenance team about
application issues via email or RSS feeds.


Why choose ELMAH -
ELMAH provides a low cost, easily and quickly deployable, application-wide error logging facility which provides the maintenance and support teams with in-depth exception information required while debugging and resolving production application issues.

Link -

Wednesday 19 May 2010

Tips and Tricks - Visual Studio IDE

VS 2008 keyboard shortcuts -
http://nerdfortress.s3.amazonaws.com/visual-studio-2008-keyboard-shortcuts.html

Tips for navigating to a class definition -
If you want to go to a definition for a class, variable etc, u will need to point at the variable and press the F12 button to navigate to its definition.
Also, if you want to find out all the properties for a class ( .net class) , Eg: - Page

You will need to type the fully qualified name - Eg:- System.Web.UI.Page

Now the URL can be typed as
http://msdn2.microsoft.com/System.Web.UI.Page.aspx

Some useful links for .Net developers

101 LINQ Examples -
http://msdn.microsoft.com/en-us/vcsharp/aa336746.aspx

Nice Q and A sessions can be found in
http://stackoverflow.com/

WCF tutorials -
http://www.wcftutorial.net/

WPF Tutorials -
http://www.wpftutorial.net/

RJS Calendar Control -
http://code.msdn.microsoft.com/RJSPopCalendar/


Please let me know for any updates

Tuesday 18 May 2010

Tools and Utilities

Tools and utilities-

Here is a list of tools and utilities that can be used to enhance productivity.

I have classified them into Developer Tools and Common Tools. And what’s more – They are free to use without any license tags attached.

Developer Tools –

1. SQLDBx – One of the most useful utilities from a database perspective. Can support both SQL 2000 and 2005 versions from Microsoft. Has an option to connect to Oracle and Sybase servers as well. Also, have options like intellisense and maintaining SQL History. Has various context menu options for exporting results to Excel, generating scripts for insert, update and delete for a particular row or set of rows affected. The free, personal edition can be downloaded form the below link:-

http://www.sqldbx.com/personal_edition.htm

2. FireBug – Nice add-on for Firefox which can be used for debugging, editing monitoring HTML rendering, JavaScript and CSS of any site. Also, has support for DOM as well. The alternative to this in IE is the Internet Developer tools (available with only IE 8). Can be downloaded from the following link.

https://addons.mozilla.org/en-US/firefox/addon/1843/


3. XML Notepad 2007- A free utility to create XML files through easy user inputs. No need to manually create XML tags. Link : http://www.microsoft.com/downloads/details.aspx?familyid=72D6AA49-787D-4118-BA5F-4F30FE913628&displaylang=en

4. Notepad++ - A free utility or editor which has support for multi languages in notepad version itself. Allows multiple tabs as well. Other alternative most popularly used is EditPlus.

http://notepad-plus.sourceforge.net/uk/download.php

5. 7 -zip - A installable for all your zipping needs !
No need for Winzip, Winrar and compatibility issues.
http://www.7-zip.org/


Common Tools –

1. Free Commander – A tool which is useful for tabbed navigation in Windows Explorer. Can be downloaded from the below link. You could also navigate easily by clicking on the root link or on the address menu after customizing your settings.



2. Screen Toaster - Screen Toaster is a free web-based screen recorder designed to capture screen activity in real-time to rapidly create and share tutorials, demos, training, lectures and more.

  1. To watch videos : Just click on a video to launch the player.
  2. To record videos : Click on "Start recording" or "Record", start recording using the shortcuts or via the recorder.

You can add audio and an embed webcam while you are recording.
When finished, add subtitles, choose your thumbnail, describe and tag your video so other users can easily find your screencasts.








Microsoft VDM -- virtual desktop manger

Microsoft process explorer -- enhanced process explorer

widom-soft screen hunter -- screen grabber

stickies -- digital post-it

Microsoft time zone -- multiple timezone



Friday 29 January 2010

Paging Sorting and Filtering using J Query, J-SON and C#

We all have known that the Visual Studio IDE has the Grid View control that gives us inbuilt methods and capabilities to do the customized paging, sorting and filtering of data.


Now, the disadvantages:-

1. Navigation – We would have to write our own custom based procedures or methods to fetch only the required records if we implement paging. Also, we would have to implement the update panel and /or update progress available with AJAX toolkit to give a nice navigation progress feel to the user.

2. Time for Search Results – The time delay for the user would be more, since there are overheads that would be involved by using the GridView control and also more overheads if any row data bound events are written on them. Any other events attached to the page would result in further delay to display the results

3. Page size- Usually higher and complex controls also would be used for any such feature which requires any other person to have atleast a fair bit of understanding on how the page works.

Enter J-Query, where this can be used in all your applications and which is more performance oriented. The need to navigate, page and search records according to a particular search criteria is much simpler and faster.

Before letting you know all the details, please visit the following sites –

Introduction to JSON


For introduction to J-Query:

J-templates


JSON Plugin


So, I will now compare the conventional method v/s the J-query way of writing code.


Taking the example of a cascading drop down effect to be achieved,


Normal style:-

Have 2 dropdowns and have a selected index changed event for the first dropdown and get the selected value of the first dropdown, and then populate the second dropdown by calling a method from your business logic. The better approach would be to use the Cascading dropdown provided by AJAX control toolkit.

Sample code shown below:-

AJAX reference in the page:-

Drop down code-




AJAX Cascading drop down reference written-






















Also, there would be a web service which would fetch relevant records. The web service code can be found from the sample reference link below:-

Reference for AJAX Cascading drop down.

J–Query method –
Download the latest version of J - Query from the J-Query home page and reference that in your page-
Then you would have an inline code of java script or an external file, which does the cascading effect without any hassles. Also, no other references are required on the page, thus making it lightweight and performance oriented.

Page reference to the script -

Drop down HTML –




Document ready code in external JS for the page –




Dropdown change event triggered in J-query –




Manipulating 2nd dropdown values inside the change event for 1st dropdown -



Calling web method in J Query–